“ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಸೂಚನೆಗಳು ಕಾಣಿಸಿಕೊಳ್ಳುವುವು. ಭೂಮಿಯಲ್ಲಾದರೋ, ಮೊರೆಯುವ ತೆರೆಗಳ ಮತ್ತು ಭೋರ್ಗರೆಯುವ ಸಮುದ್ರದ ನಿಮಿತ್ತ ಜನಾಂಗಗಳು ದಿಕ್ಕುತೋಚದೆ ಸಂಕಟಕ್ಕೆ ಒಳಗಾಗುವರು. ಆಕಾಶದ ಶಕ್ತಿಗಳು ಕದಲುವುದರಿಂದ ಲೋಕಕ್ಕೆ ಏನು ಸಂಭವಿಸುವುದೋ ಎಂಬ ಭಯಭೀತಿಯಿಂದ, ಮಾನವರು ಮನಗುಂದಿಹೋಗುವರು. ಆಗ ಮನುಷ್ಯಪುತ್ರನಾದ ನಾನು ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಜನರು ಕಾಣುವರು.