ಆದಿಕಾಂಡ 5

5
ಆದಾಮನಿಂದ ನೋಹನವರೆಗೆ
1ಆದಾಮನ ವಂಶದವರ ದಾಖಲೆಯಿದು:
ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ಅವನನ್ನು ತಮ್ಮನ್ನೇ ಹೋಲುವಂತೆ ಉಂಟುಮಾಡಿದರು. 2ದೇವರು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿ ಮಾಡಿದರು. ಅದೇ ದಿನದಲ್ಲಿ ಅವರನ್ನು ಆಶೀರ್ವದಿಸಿ, ಅವರಿಗೆ “ಮನುಷ್ಯ”#5:2 ಹೀಬ್ರೂ ಭಾಷೆಯಲ್ಲಿ ಆದಾಮ ಎಂದು ಕರೆದರು.
3ಆದಾಮನು ನೂರಮೂವತ್ತು ವರುಷದವನಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ, “ಸೇತ್” ಎಂದು ಹೆಸರಿಟ್ಟನು. 4ಸೇತನು ಹುಟ್ಟಿದ ಮೇಲೆ ಆದಾಮನು ಗಂಡು ಹೆಣ್ಣು ಮಕ್ಕಳನ್ನು ಪಡೆದು, ಎಂಟುನೂರು ವರುಷ ಬದುಕಿದನು. 5ಆದಾಮನು ಒಟ್ಟು ಒಂಬೈನೂರ ಮೂವತ್ತು ವರುಷ ಬದುಕಿ ಸತ್ತನು.
6ಸೇತನು ನೂರ ಐದು ವರುಷದವನಾದಾಗ ಎನೋಷನನ್ನು ಪಡೆದನು. 7ಎನೋಷನು ಹುಟ್ಟಿದ ಮೇಲೆ ಸೇತನು ಎಂಟುನೂರ ಏಳು ವರುಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳು ಇದ್ದರು. 8ಸೇತನು ಒಟ್ಟು ಒಂಬೈನೂರ ಹನ್ನೆರಡು ವರ್ಷ ಬದುಕಿ ಸತ್ತನು.
9ಎನೋಷನು ತೊಂಬತ್ತು ವರ್ಷದವನಾದಾಗ ಕೇನಾನನನ್ನು ಪಡೆದನು. 10ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರುಷ ಬದುಕಿದನು. 11ಅವನು ಒಟ್ಟು ಒಂಬೈನೂರ ಐದು ವರುಷ ಬದುಕಿ ಸತ್ತನು.
12ಕೇನಾನನು ಎಪ್ಪತ್ತು ವರುಷದವನಾದಾಗ, ಅವನಿಂದ ಮಹಲಲೇಲನು ಹುಟ್ಟಿದನು. 13ಕೇನಾನನು ಮಹಲಲೇಲನು ಹುಟ್ಟಿದ ಮೇಲೆ ಎಂಟುನೂರ ನಲವತ್ತು ವರ್ಷ ಬದುಕಿ, ಗಂಡು ಹೆಣ್ಣು ಮಕ್ಕಳನ್ನು ಪಡೆದನು. 14ಕೇನಾನನು ಒಟ್ಟು ಒಂಬೈನೂರ ಹತ್ತು ವರ್ಷ ಬದುಕಿ ಸತ್ತನು.
15ಮಹಲಲೇಲನು ಅರವತ್ತೈದು ವರ್ಷದವನಾಗಿದ್ದಾಗ, ಅವನಿಂದ ಯೆರೆದನು ಹುಟ್ಟಿದನು. 16ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಎಂಟುನೂರ ಮೂವತ್ತು ವರ್ಷ ಬದುಕಿ ಗಂಡು, ಹೆಣ್ಣು ಮಕ್ಕಳನ್ನು ಪಡೆದನು. 17ಮಹಲಲೇಲನು ಎಂಟುನೂರ ತೊಂಬತ್ತೈದು ವರ್ಷ ಬದುಕಿ ತರುವಾಯ ಸತ್ತನು.
18ಯೆರೆದನು ನೂರ ಅರವತ್ತೆರಡು ವರುಷದವನಾಗಿದ್ದಾಗ, ಅವನಿಂದ ಹನೋಕನು ಹುಟ್ಟಿದನು. 19ಹನೋಕನು ಹುಟ್ಟಿದ ಮೇಲೆ, ಯೆರೆದನು ಎಂಟುನೂರು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು. 20ಯೆರೆದನು ಒಟ್ಟು ಒಂಬೈನೂರ ಅರವತ್ತೆರಡು ವರ್ಷ ಬದುಕಿ, ತರುವಾಯ ಸತ್ತನು.
21ಹನೋಕನು ಅರವತ್ತೈದು ವರ್ಷದವನಾಗಿದ್ದಾಗ, ಅವನಿಂದ ಮೆತೂಷೆಲಹನು ಹುಟ್ಟಿದನು. 22ಮೆತೂಷೆಲಹನು ಹುಟ್ಟಿದ ತರುವಾಯ, ಹನೋಕನು ಮುನ್ನೂರು ವರ್ಷ ದೇವರೊಂದಿಗೆ ನಡೆದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು. 23ಹನೋಕನು ಒಟ್ಟು ಮುನ್ನೂರ ಅರವತ್ತೈದು ವರ್ಷ ಬದುಕಿದನು. 24ದೇವರೊಂದಿಗೆ ನಂಬಿಗಸ್ತನಾಗಿ ನಡೆಯುತ್ತಿದ್ದ ಹನೋಕನನ್ನು ದೇವರು ತೆಗೆದುಕೊಂಡು ಹೋದದ್ದರಿಂದ ಅವನು ಕಾಣಲಿಲ್ಲ.
25ಮೆತೂಷೆಲಹನು ನೂರ ಎಂಬತ್ತೇಳು ವರ್ಷದವನಾಗಿದ್ದಾಗ, ಅವನಿಂದ ಲೆಮೆಕನು ಹುಟ್ಟಿದನು. 26ಲೆಮೆಕನು ಹುಟ್ಟಿದ ಮೇಲೆ, ಮೆತೂಷೆಲಹನು ಏಳುನೂರ ಎಂಬತ್ತೆರಡು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು. 27ಮೆತೂಷೆಲಹನಿಗೆ ಒಟ್ಟು ಒಂಬೈನೂರ ಅರವತ್ತೊಂಭತ್ತು ವರ್ಷಗಳಾಗಿದ್ದವು. ತರುವಾಯ ಅವನು ಸತ್ತನು.
28ಲೆಮೆಕನು ನೂರ ಎಂಬತ್ತೆರಡು ವರ್ಷದವನಾದಾಗ, ಒಬ್ಬ ಮಗನನ್ನು ಪಡೆದನು. 29ಅವನಿಗೆ, ನೋಹ#5:29 ನೋಹ ಹೀಬ್ರೂ ಭಾಷೆಯಲ್ಲಿ ಸಾಂತ್ವನ ಎಂದು ಹೆಸರಿಟ್ಟು, “ಯೆಹೋವ ದೇವರು ಶಪಿಸಿದ ಭೂಮಿಯಿಂದ ನಮಗೆ ಉಂಟಾದ ಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಉಪಶಮನಗೊಳಿಸುವನು,” ಎಂದು ಹೇಳಿದನು. 30ನೋಹನು ಹುಟ್ಟಿದ ಮೇಲೆ, ಲೆಮೆಕನು ಗಂಡು, ಹೆಣ್ಣು ಮಕ್ಕಳನ್ನು ಪಡೆದು, ಐನೂರ ತೊಂಬತ್ತೈದು ವರ್ಷ ಬದುಕಿದನು. 31ಲೆಮೆಕನು ಒಟ್ಟು ಏಳುನೂರ ಎಪ್ಪತ್ತೇಳು ವರ್ಷ ಬದುಕಿದನು. ತರುವಾಯ ಅವನು ಸತ್ತನು.
32ನೋಹನು ಐನೂರು ವರ್ಷದವನಾಗಿದ್ದನು. ಆಗ ನೋಹನಿಂದ ಶೇಮ್, ಹಾಮ್, ಯೆಫೆತರು ಹುಟ್ಟಿದರು.

הדגשה

שתף

העתק

None

רוצים לשמור את ההדגשות שלכם בכל המכשירים שלכם? הירשמו או היכנסו