YouVersion Logo
Search Icon

ಲೂಕ. ಮುನ್ನುಡಿ

ಮುನ್ನುಡಿ
ಪ್ರಭು ಯೇಸು ಇಸ್ರಯೇಲ್ ಜನತೆಯ ವಾಗ್ದತ್ತ ರಕ್ಷಕ ಮಾತ್ರವಲ್ಲ, ಇಡೀ ಮಾನವಕುಲದ ಉದ್ಧಾರಕ. ಈ ಸತ್ಯವೇ ಲೂಕನ‍ ಶುಭಸಂದೇಶಕ್ಕೆ ಪ್ರಧಾನ. “ದೀನದಲಿತರಿಗೆ ಶುಭಸಂದೇಶವನ್ನು ಸಾರಲು ಯೇಸು ಪವಿತ್ರಾತ್ಮರಿಂದ ಅಭಿಷಿಕ್ತರಾದವರು,” ಎಂಬುದನ್ನು ಇದರಲ್ಲಿ ಒತ್ತಿ ಹೇಳಲಾಗಿದೆ. ಬಗೆಬಗೆಯ ಕುಂದುಕೊರತೆಗಳಿಂದ ಬಳಲುತ್ತಿರುವ ಜನತೆಯ ಬಗ್ಗೆ ಕರುಣೆ ಹಾಗೂ ಅನುಕಂಪದಿಂದ ತುಂಬಿತುಳುಕುತ್ತದೆ ಈ ಸಂದೇಶ.
ಶಾಂತಿಸಂತಸಕ್ಕೂ ಇದರಲ್ಲಿ ಸಾಕಷ್ಟು ಪ್ರಾಮುಖ್ಯತೆ ಕೊಡಲಾಗಿದೆ. ಕ್ರಿಸ್ತೇಸುವಿನ ಆಗಮನ ಮತ್ತು ಆರೋಹಣವನ್ನು ಬಣ್ಣಿಸುವ ಮೊದಲನೆಯ ಹಾಗೂ ಕೊನೆಯ ಅಧ್ಯಾಯಗಳಲ್ಲಿ ಈ ಗುಣ ಗಣಗಣಿಸುತ್ತದೆ.
ಯೇಸುಸ್ವಾಮಿ ಸ್ವರ್ಗಾರೋಹಣವಾದ ಮೇಲೆ ಕ್ರೈಸ್ತವಿಶ್ವಾಸ ಹಾಗೂ ಶ್ರದ್ಧೆ ಹೇಗೆ ಹಬ್ಬಿಹರಡಿತೆಂಬುದನ್ನು ಲೇಖಕ ಲೂಕನು, “ಪ್ರೇಷಿತರ ಕಾರ್ಯಕಲಾಪಗಳು” ಎಂಬ ತನ್ನ ಮತ್ತೊಂದು ಕೃತಿಯಲ್ಲಿ ಸವಿಸ್ತಾರವಾಗಿ ನಿರೂಪಿಸಿದ್ದಾನೆ.
ಸ್ನಾನಿಕ ಯೊವಾನ್ನನ ಮತ್ತು ಯೇಸುವಿನ ಜನನ ಹಾಗೂ ಬಾಲ್ಯಗಳ ವೃತ್ತಾಂತವನ್ನು ಈ ಕೃತಿಯಲ್ಲಿ ಮಾತ್ರ ಕಾಣಬಹುದು. ಅಂತೆಯೇ ಯೇಸು ಗಲಿಲೇಯದಿಂದ ಜೆರುಸಲೇಮಿಗೆ ಕೈಗೊಂಡ ಪ್ರಯಾಣದಲ್ಲಿ ಸಂಭವಿಸಿದ ಘಟನೆಗಳ ಕ್ರಮಬದ್ಧ ವರದಿಗೆ ಈ ಕೃತಿ ಅಗತ್ಯ. ದೇವದೂತರ ಗಾನ, ಕುರುಬರ ಭೇಟಿ, ದೇವಾಲಯದಲ್ಲಿ ಬಾಲಕ ಯೇಸುವಿನ ಸಂವಾದ, ಸದಯ ಸಮಾರಿತ, ದುಂದುಗಾರ ಮಗ, ಈ ಮುಂತಾದ ಸಾಧನೆ ಬೋಧನೆಗಳು ಮಿಕ್ಕ ಮೂರು ಶುಭಸಂದೇಶಗಳಲ್ಲಿ ದೊರಕವು. ಪ್ರಾರ್ಥನೆ, ಪವಿತ್ರಾತ್ಮ, ಯೇಸುವಿನ ಸೇವಾವೃತ್ತಿಯಲ್ಲಿ ಮಹಿಳೆಯರ ಪಾತ್ರ ಮತ್ತು ಪಾಪಪರಿಹಾರ ಇವು ಈ ಶುಭಸಂದೇಶದ ವೈಶಿಷ್ಟ್ಯವೆನ್ನಬಹುದು.
ಪರಿವಿಡಿ
ಪೀಠಿಕೆ 1:1-4
ಸ್ನಾನಿಕ ಯೊವಾನ್ನನ ಮತ್ತು ಯೇಸುವಿನ ಜನನ ಹಾಗೂ ಬಾಲ್ಯ 1:5—2:52
ಸ್ನಾನಿಕ ಯೊವಾನ್ನನ ಸೇವಾವೃತ್ತಿ 3:1-20
ಯೇಸು ಪಡೆದ ದೀಕ್ಷಾಸ್ನಾನ ಮತ್ತು ಸೈತಾನನ ಪ್ರಲೋಭನೆಗಳು 3:21—4:13
ಗಲಿಲೇಯದಲ್ಲಿ ಯೇಸುವಿನ ಬಹಿರಂಗ ಸೇವಾವೃತ್ತಿ 4:14—9:50
ಗಲಿಲೇಯದಿಂದ ಜೆರುಸಲೇಮಿಗೆ 9:51—19:27
ಯೇಸುವಿನ ಕೊನೆಯ ದಿನಗಳು - ಜೆರುಸಲೇಮ್ ಮತ್ತು ಪರಿಸರದಲ್ಲಿ 19:28—23:56
ಯೇಸುವಿನ ಪುನರುತ್ಥಾನ, ದಿವ್ಯದರ್ಶನ ಹಾಗೂ ಸ್ವರ್ಗಾರೋಹಣ 24:1-53

Highlight

Share

Copy

None

Want to have your highlights saved across all your devices? Sign up or sign in