BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣSample

ಯೇಸು ಜೀವಂತವಾಗಿದ್ದಾಗಅವರನ್ನು ಹಿಂಬಾಲಿಸಿದ ಕೆಲವು ಮಹಿಳೆಯರ ಬಗ್ಗೆ ಲೂಕನು ಹೇಳುತ್ತಾನೆ. ಮರಣದಂಡನೆಯ ದಿನದಂದು ಯೇಸು ಸಮಾಧಿಯಲ್ಲಿ ಇರುವುದನ್ನು ಅವರು ನೋಡುತ್ತಾರೆ, ಮತ್ತು ಸಬ್ಬತ್ ದಿನವಾದ ಮರುದಿನ ಅವರಿಂದ ಆದಷ್ಟು ಬೇಗೆ ಸೂರ್ಯೋದಯದ ಸಮಯದಲ್ಲಿ ಯೇಸುವಿನ ಸಮಾಧಿಗೆ ಹಿಂತಿರುಗುತ್ತಾರೆ. ಆದರೆ ಅವರು ಅಲ್ಲಿ ಬಂದಾಗ,ಸಮಾಧಿಯು ತೆರೆದ ಖಾಲಿಯಾಗಿರುವುದನ್ನು ಕಂಡರು. ಯೇಸುವಿನ ದೇಹ ಎಲ್ಲಿಗೆ ಹೋಗಿದೆ ಎಂದು ಅವರಿಗೆ ಕಂಡುಹಿಡಿಯಲು ಸಾಧ್ಯವಾಗಲಿಲ್ಲ, ಮತ್ತು ಇದ್ದಕ್ಕಿದ್ದಂತೆ ಬೆಳಕಿನಿಂದ ಹೊಳೆಯುತ್ತಿದ್ದ ಎರಡು ನಿಗೂಢ ಆಕೃತಿಗಳು, ಯೇಸು ಜೀವಂತವಾಗಿದ್ದಾನೆಂದು ಹೇಳಲು ಎಲ್ಲಿಂದಲೋ ಕಾಣಿಸಿಕೊಂಡವು. ಅವರು ಆಶ್ಚರ್ಯಚಕಿತರಾದರು. ಅವರು ಓಡಿಹೋಗಿ ಅವರು ನೋಡಿದ್ದನ್ನೆಲ್ಲ ಇತರ ಶಿಷ್ಯರಿಗೆ ಹೇಳುತ್ತಾರೆ, ಆದರೆ ಅವರ ವರದಿಯು ಅಸಂಬದ್ಧವೆಂದು ಅನಿಸುತ್ತದೆ , ಮತ್ತು ಯಾರೂ ಅವರನ್ನು ನಂಬುವುದಿಲ್ಲ.
ಏತನ್ಮಧ್ಯೆ, ಜೆರೂಸಲೇಮಿನ ಹೊರಗಡೆ, ಯೇಸುವಿನ ಒಂದೆರಡು ಅನುಯಾಯಿಗಳು ಎಮ್ಮೌಸ್ ಎಂಬ ಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಯೇಸು ಅವರನ್ನು ಸೇರಿ ಜೊತೆ ಪ್ರಯಾಣಿಸಲು ಪ್ರಾರಂಭಿಸಿದಾಗ, ಅವರು ಪಾಸ್ಕ ವಾರದಲ್ಲಿ ಸಂಭವಿಸಿದ ಎಲ್ಲದರ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ, ವಿಚಿತ್ರವೆಂದರೆ, ಅದು ಅವರೇ ಎoದು ಅವರಿಗೆ ತಿಳಿದಿಲ್ಲ. ಯೇಸು ಸಂಭಾಷಣೆ ಮಾಡುತ್ತಾ ಅವರು ಏನು ಮಾತನಾಡುತ್ತಿದ್ದಾರೆಂದು ಕೇಳುತ್ತಾರೆ. ಅವರು ತಮ್ಮ ಜಾಡುಗಳಲ್ಲಿ ನಿಲ್ಲುತ್ತಾರೆ, ವಿಷಯದಿಂದ ದುಃಖಿತರಾಗಿ ಕಳೆದ ಕೆಲವು ದಿನಗಳಿಂದ ಏನು ನಡೆಯುತ್ತಿದೆ ಎಂದು ಅವರು ತಿಳಿದಿಲ್ಲವೆಂದು ಆಶ್ಚರ್ಯ ಪಡುತ್ತಾರೆ. ಇಸ್ರಾಯೇಲನ್ನು ರಕ್ಷಿಸುತ್ತಾರೆ ಎಂದು ಅವರು ಭಾವಿಸಿ ಬದಲಿಗೆ ಮರಣದೊಂಡನೆ ನೀಡಲಾದ ಪ್ರಬಲ ಪ್ರವಾದಿಯಾದ ಯೇಸುವಿನ ಬಗ್ಗೆ ಮಾತನಾಡುತ್ತಿದ್ದಾರೆಂದು ಅವರು ಹೇಳುತ್ತಾರೆ. ಅವರು ಜೀವಂತವಾಗಿದ್ದಾರೆಂದು ಕೆಲವು ಮಹಿಳೆಯರು ಹೇಗೆ ಹೇಳುತ್ತಾರೆ, ಆದರೆ ಏನು ನಂಬಬೇಕೆಂದು ಅವರಿಗೆ ತಿಳಿದಿಲ್ಲ ಎಂದು ಹೇಳುವರು. ಆದುದರಿಂದ ಯಹೂದಿ ಧರ್ಮಗ್ರಂಥಗಳು ಎಂದೂ ಇದನ್ನೇ ಸೂಚಿಸುತ್ತಿದ್ದವು ಎಂದು ಯೇಸು ವಿವರಿಸುತ್ತಾರೆ. ಅವರು ನಿಜವಾಗಿಯೂ ಬಂಡುಕೋರರಾಗಿರುವವರ ಪರವಾಗಿ ಬಂಡಾಯಗಾರರಾಗಿ ಬಳಲಿ ಸಾಯುವ ರಾಜನ ಅಗತ್ಯ ಇಸ್ರೇಲಿಗೆ ಇತ್ತು. ಈ ರಾಜನು ತನ್ನ ಪುನರುತ್ಥಾನದಿಂದ ಅದನ್ನು ಸ್ವೀಕರಿಸುವವರಿಗೆ ನಿಜವಾದ ಜೀವನವನ್ನು ಕೊಡುಲು ಸಮರ್ಥಗೊಳಿಸಲಾಗುತ್ತದೆ . ಪ್ರಯಾಣಿಕರು ಇನ್ನೂಅರ್ಥವಾಗಲಿಲ್ಲ. ಅವರು ಎಂದಿನಂತೆ ಗೊಂದಲಕ್ಕೊಳಗಾಗಿ ಅವರೊಂದಿಗೆ ಹೆಚ್ಚು ಸಮಯ ಇರಬೇಕೆಂದು ಯೇಸುವನ್ನು ಒತ್ತಾಯಿಸುತ್ತಾರೆ. ಯೇಸು ಅವರೊಂದಿಗೆ ಹೇಗೆ ಊಟ ಮಾಡಲು ಕುಳಿತುಕೊಳ್ಳುತ್ತಾರೆ ಎಂದು ಲೂಕನು ಹೇಳುವ ದೃಶ್ಯಕ್ಕೆ ಕೊಂಡೊಯ್ಯುತ್ತದೆ. ಅವರು ತನ್ನ ಮರಣದ ಮೊದಲು ಕೊನೆಯ ಊಟದಲ್ಲಿ ಮಾಡಿದಂತೆಯೇ ರೊಟ್ಟಿಯನ್ನು ತೆಗೆದುಕೊಂಡು ಆಶೀರ್ವದಿಸಿ, ಮುರಿದು ಅವರಿಗೆ ನೀಡುತ್ತಾರೆ. ಇದು ಅವರ ಮುರಿದ ದೇಹದ ಚಿತ್ರ, ಶಿಲುಬೆಯಲ್ಲಿ ಅವರ ಸಾವು. ಮತ್ತು ಅವರು ಮುರಿದ ರೊಟ್ಟಿಯನ್ನು ತೆಗೆದುಕೊಂಡಾಗಲೇ ಯೇಸುವನ್ನು ನೋಡಲು ಅವರ ಕಣ್ಣುಗಳು ತೆರೆದುಕೊಳ್ಳುತ್ತವೆ. ಯೇಸು ನಿಜವಾಗಿಯೂ ಯಾರೆಂದು ನೋಡಲು ಹೇಗೆ ಕಷ್ಟವಾಗುತ್ತದೆ ಎಂಬುದನ್ನು ಕುರಿತ ಕಥೆ ಇದು. ಈ ಮನುಷ್ಯನ ಅಪಮಾನಕರ ಮರಣದಂಡನೆಯ ಮೂಲಕ ದೇವರ ರಾಜ ಶಕ್ತಿ ಮತ್ತು ಪ್ರೀತಿಯನ್ನು ಹೇಗೆ ಬಹಿರಂಗಪಡಿಸಬಹುದು? ದೌರ್ಬಲ್ಯ ಮತ್ತು ಆತ್ಮತ್ಯಾಗದ ಮೂಲಕ ಒಬ್ಬ ವಿನಮ್ರ ಮನುಷ್ಯನು ಹೇಗೆ ವಿಶ್ವದ ರಾಜನಾಗಬಹುದು? ನೋಡಲು ತುಂಬಾ ಕಷ್ಟ! ಆದರೆ ಇದು ಲೂಕನ ಸುವಾರ್ತೆಯ ಸಂದೇಶವಾಗಿದೆ. ಅದನ್ನು ನೋಡಲು ಮತ್ತು ಯೇಸುವಿನ ತಲೆಕೆಳಗಾದ ರಾಜ್ಯವನ್ನು ಸ್ವೀಕರಿಸಲು ನಮ್ಮಮನಸ್ಸು ರೂಪಾಂತರವಾಗ ಬೇಕಾಗುತ್ತದೆ.
Scripture
About this Plan

ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.
More
Related Plans

Mom Guilt Meets Grace

How We Gave $1 Million (Without Being Rich)

Kingdom Courage

The DEEP Method: How to Discover, Explore, Engage, Practice God's Word

Pawprints & Prayers: Devotions for Dog Lovers

God Gives Good Gifts to Everyone

The Last Half Hour: When Waiting Becomes Glory

Provision

Jesus, I Want to Know You
