ಆದಿಕಾಂಡ 23

23
ಸಾರಳು ಸತ್ತಾಗ ಅಬ್ರಹಾಮನು ಮಕ್ಪೇಲದ ಗವಿಯನ್ನು ಶ್ಮಶಾನಕ್ಕಾಗಿ ಕೊಂಡುಕೊಂಡದ್ದು
1ಸಾರಳ ಜೀವಮಾನಕಾಲವು ನೂರಿಪ್ಪತ್ತೇಳು ವರುಷ; 2ಇಷ್ಟು ವರುಷ ಬದುಕಿದ ಮೇಲೆ ಆಕೆ ಕಾನಾನ್ ದೇಶದಲ್ಲಿರುವ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಸತ್ತಳು. ಅಬ್ರಹಾಮನು ಬಂದು ಆಕೆಯ ನಿವಿುತ್ತ ಗೋಳಾಡಿ ಕಣ್ಣೀರು ಸುರಿಸಿದನು. 3ಆಮೇಲೆ ಆಕೆಯ ಶವದ ಬಳಿಯಿಂದ ಎದ್ದು ಹಿತ್ತಿಯರ ಬಳಿಗೆ ಹೋಗಿ ಅವರಿಗೆ - 4ನಾನು ನಿಮ್ಮಲ್ಲಿ ಪರದೇಶದವನೂ ಪರವಾಸಿಯೂ ಆಗಿದ್ದೇನಷ್ಟೆ. ತೀರಿಹೋಗಿರುವ ನನ್ನ ಪತ್ನಿಯ ಸಮಾಧಿಗೋಸ್ಕರ ನಿಮ್ಮಲ್ಲಿ ನನ್ನ ಸ್ವಂತಕ್ಕೆ ಭೂವಿುಯನ್ನು ಕೊಡಬೇಕೆಂದು ಕೇಳಿಕೊಂಡನು. 5,6ಹಿತ್ತಿಯರು ಅವನಿಗೆ - ಸ್ವಾಮೀ, ನಮ್ಮ ಮಾತನ್ನು ಕೇಳು; ನೀನು ನಮಗೆ ಮಹಾಪ್ರಭುವಾಗಿದ್ದೀಯಷ್ಟೆ. ತೀರಿಹೋದ ನಿನ್ನ ಪತ್ನಿಯ ದೇಹವನ್ನು ನಮಗಿರುವ ಸಮಾಧಿಗಳೊಳಗೆ ಶ್ರೇಷ್ಠವಾದದ್ದರಲ್ಲಿ ಇಡಬಹುದು. ನಿನ್ನ ಹೆಂಡತಿಯ ಶವವನ್ನು ಇಡುವದಕ್ಕೆ ನಮ್ಮೊಳಗೆ ಒಬ್ಬನಾದರೂ ತನಗಿರುವ ಶ್ಮಶಾನ ಭೂವಿುಯನ್ನು ಕೊಡುವದಕ್ಕೆ ಹಿಂದೆಗೆಯುವದಿಲ್ಲವೆಂದು ಉತ್ತರ ಕೊಡಲು ಅಬ್ರಹಾಮನು ಎದ್ದು ಹಿತ್ತಿಯರಾಗಿದ್ದ 7ಆ ದೇಶದವರಿಗೆ ಬೊಗ್ಗಿ ನಮಸ್ಕರಿಸಿ ಅವರ ಸಂಗಡ ಇನ್ನೂ ಮಾತಾಡಿ - 8ನಾನು ನಿಮ್ಮಲ್ಲಿ ನನ್ನ ಪತ್ನಿಯ ಶವವನ್ನು ಸಮಾಧಿಮಾಡುವದು ನಿಮಗೆ ಒಪ್ಪಿಗೆಯಾಗಿದ್ದರೆ ಒಂದು ವಿಜ್ಞಾಪನೆಯುಂಟು. ನೀವು ಚೋಹರನ ಮಗನಾದ ಎಫ್ರೋನನ ಸಂಗಡ ನನಗೋಸ್ಕರ ಮಾತಾಡಿ 9ಅವನ ಭೂವಿುಯ ಅಂಚಿನಲ್ಲಿರುವ ಮಕ್ಪೇಲದ ಗವಿಯನ್ನು ನನಗೆ ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ಅವನು ಸಮಾಧಿಯ ಸ್ಥಳವನ್ನು ನನ್ನ ಸ್ವಂತಕ್ಕಾಗಿ ನಿಮ್ಮೆದುರಿನಲ್ಲಿ ಕೊಟ್ಟರೆ ಪೂರ್ಣಕ್ರಯವನ್ನು ಕೊಡುತ್ತೇನೆ ಅಂದನು. 10ಇಷ್ಟರಲ್ಲಿ ಎಫ್ರೋನನೇ ಅಲ್ಲಿ ಹಿತ್ತಿಯರ ನಡುವೆ ಕೂತಿದ್ದನು. ಹೀಗಿರಲಾಗಿ ಹಿತ್ತಿಯನಾದ ಎಫ್ರೋನನು ಹಿತ್ತಿಯರಾಗಿದ್ದ #23.10 ಮೂಲ: ಊರುಬಾಗಿಲಲ್ಲಿ ಹೋಗುವವರೆಲ್ಲರ. ಆ ಊರಿನವರೆಲ್ಲರ ಎದುರಿನಲ್ಲಿ ಅಬ್ರಹಾಮನಿಗೆ - 11ಹಾಗಲ್ಲ ಸ್ವಾಮೀ, ನನ್ನ ಮಾತನ್ನು ಲಾಲಿಸು. ಆ ಭೂವಿುಯನ್ನೂ ಅದರಲ್ಲಿರುವ ಗವಿಯನ್ನೂ ನಿನಗೆ ಸುಮ್ಮನೆ ಕೊಡುತ್ತೇನೆ; ನನ್ನ ಜನರ ಮುಂದೆಯೇ ಕೊಡುತ್ತೇನೆ; ತೀರಿಹೋದ ನಿನ್ನ ಪತ್ನಿಗೆ ಅದರಲ್ಲಿ ಸಮಾಧಿಮಾಡಬಹುದು ಎಂದು ಹೇಳಲು 12ಅಬ್ರಹಾಮನು ಆ ದೇಶದ ಜನರಿಗೆ ಬೊಗ್ಗಿ ನಮಸ್ಕರಿಸಿ ಅವರೆಲ್ಲರ ಮುಂದೆ ಎಫ್ರೋನನಿಗೆ - 13ಕೊಡಲಿಕ್ಕೆ ಮನಸ್ಸಿದ್ದರೆ ದಯವಿಟ್ಟು ನಾನು ಅರಿಕೆಮಾಡುವದನ್ನು ಕೇಳು; ಆ ಭೂವಿುಗೆ ಕ್ರಯವನ್ನು ಕೊಡುತ್ತೇನೆ. ನನ್ನಿಂದ ಕ್ರಯ ತೆಗೆದುಕೊಂಡರೆ ಅದರಲ್ಲಿ ನನ್ನ ಪತ್ನಿಗೆ ಸಮಾಧಿಮಾಡುವೆನು ಎಂದು ಹೇಳಿದನು. 14ಅದಕ್ಕೆ ಎಫ್ರೋನನು - ಸ್ವಾಮೀ, ನನ್ನ ಮಾತನ್ನು ಲಾಲಿಸು; 15ನಾನೂರು ರೂಪಾಯಿ ಬಾಳುವ ಭೂವಿುಯ ವಿಷಯದಲ್ಲಿ ನಿನಗೂ ನನಗೂ ವಾದವೇತಕ್ಕೆ? ಸಮಾಧಿಮಾಡಬಹುದು ಅಂದನು. 16ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿದನು. ಎಫ್ರೋನನು ಹಿತ್ತಿಯರ ಎದುರಿನಲ್ಲಿ ಹೇಳಿದ ನಾನೂರು ರೂಪಾಯಿಗಳನ್ನು ಅಬ್ರಹಾಮನು ಸಾಹುಕಾರರಲ್ಲಿ ಸಲ್ಲುವ ಬೆಳ್ಳಿಯಿಂದ ತೂಕ ಮಾಡಿಕೊಟ್ಟನು. 17ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲಕ್ಕೆ ಸೇರಿದ ಎಫ್ರೋನನ ಭೂವಿುಯು, ಅದಕ್ಕೆ ಸೇರಿದ ಗವಿಯೂ ಅದರಲ್ಲಿ ಮತ್ತು ಅದರ ಸುತ್ತಣ ಅಂಚಿನಲ್ಲಿ ಇದ್ದ ಮರಗಳೂ ಸಹಿತವಾಗಿ, 18ಅಬ್ರಹಾಮನ ಸ್ವಂತ ಭೂವಿುಯೆಂದು ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆ ಧೃಢವಾಯಿತು. 19ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿಯಾದ ಸಾರಳ ಶವವನ್ನು ಕಾನಾನ್‍ದೇಶದಲ್ಲಿ ಹೆಬ್ರೋನೆಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಭೂವಿುಯಲ್ಲಿರುವ ಗವಿಯೊಳಗೆ ಹೂಣಿಟ್ಟನು. 20ಹಿತ್ತಿಯರು ಆ ಭೂವಿುಯನ್ನೂ ಅದರಲ್ಲಿರುವ ಗವಿಯನ್ನೂ ಸ್ವಂತವಾದ ಶ್ಮಶಾನಭೂವಿುಯಾಗುವದಕ್ಕೆ ಅಬ್ರಹಾಮನಿಗೆ ಕೊಟ್ಟು ನಿರ್ಣಯಿಸಿದರು.

Märk

Dela

Kopiera

None

Vill du ha dina höjdpunkter sparade på alla dina enheter? Registrera dig eller logga in