ಆದಿಕಾಂಡ 4
4
ಕಾಯಿನನು ತಮ್ಮನನ್ನು ಕೊಂದದ್ದು
1ಆ ಪುರುಷನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಲು ಆಕೆ ಗರ್ಭಿಣಿಯಾಗಿ ಕಾಯಿನನನ್ನು ಹೆತ್ತು - ಯೆಹೋವನ ಅನುಗ್ರಹದಿಂದ ಗಂಡುಮಗುವನ್ನು ಪಡೆದಿದ್ದೇನೆ#4.1 ಪಡೆದಿದ್ದೇನೆ ಎಂಬದಕ್ಕೆ ಮೂಲ ಭಾಷೆಯಲ್ಲಿ ಕಾನೀತಿ. ಎಂದು ಹೇಳಿದಳು. 2ತರುವಾಯ ಅವನ ತಮ್ಮನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿಕಾಯುವವನಾದನು; ಕಾಯಿನನು ವ್ಯವಸಾಯಮಾಡುವವನಾದನು.
3ಕಾಲಾಂತರದಲ್ಲಿ ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಿದನು. 4ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮಮಾಡಿದನು. 5ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಇದರಿಂದ ಕಾಯಿನನು ಬಹು ಕೋಪಗೊಂಡನು; ಅವನ ಮುಖವು ಕಳೆಗುಂದಿತು. 6ಆಗ ಯೆಹೋವನು ಅವನಿಗೆ - ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? 7ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು ಎಂದು ಹೇಳಿದನು.
8ತರುವಾಯ ಕಾಯಿನನು ತನ್ನ ತಮ್ಮನಾದ ಹೇಬೆಲನಿಗೆ - ಅಡವಿಗೆ#4.8 ಕೆಲವು ಪ್ರತಿಗಳಲ್ಲಿ ಈ ಪದಗಳಿಲ್ಲ. ಹೋಗೋಣ ಬಾ ಎಂದನು. ಅಡವಿಗೆ ಬಂದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು. 9ಯೆಹೋವನು ಕಾಯಿನನನ್ನು - ನಿನ್ನ ತಮ್ಮನಾದ ಹೇಬೆಲನು ಎಲ್ಲಿ ಎಂದು ಕೇಳಲು ಅವನು - ನಾನರಿಯೆ; ನನ್ನ ತಮ್ಮನನ್ನು ಕಾಯುವವನು ನಾನೋ ಎಂದು ಉತ್ತರಕೊಟ್ಟನು. 10ಅದಕ್ಕೆ ಯೆಹೋವನು - ನೀನು ಏನು ಮಾಡಿದಿ? ನಿನ್ನ ತಮ್ಮನ ರಕ್ತವು ಭೂವಿುಯ ಕಡೆಯಿಂದ ನನ್ನನ್ನು ಕೂಗುತ್ತದೆ, ಕೇಳು. 11ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ#4.11 ಅಥವಾ: ಈ ಭೂವಿುಯ ಮೂಲಕ; ಧರ್ಮೋ. 27.24; ಅರಣ್ಯ. 35.33 ನೋಡಿರಿ. ಭೂವಿುಯನ್ನು ಬಿಟ್ಟುಹೋಗಬೇಕೆಂದು ನಿನಗೆ ಶಾಪ ಬಂತು. 12ನೀನು ಭೂವಿುಯನ್ನು ವ್ಯವಸಾಯ ಮಾಡಿದರೂ ಇದು ಇನ್ನು ಮುಂದೆ ನಿನಗೆ ಫಲಿಸುವದಿಲ್ಲ. ನೀನು ಭೂಲೋಕದಲ್ಲಿ ಅಲೆಯುವವನೂ ದೇಶಭ್ರಷ್ಟನೂ ಆಗಿರುವಿ ಅಂದನು. 13ಕಾಯಿನನು ಯೆಹೋವನಿಗೆ - ನನ್ನ ಅಪರಾಧಫಲ ತಾಳಕೂಡದಷ್ಟಾಗಿದೆ. 14ನೀನು ಈ ಹೊತ್ತು ನನ್ನನ್ನು ಸ್ವದೇಶದಿಂದ ಹೊರಡಿಸುತ್ತೀಯಲ್ಲಾ; ನಿನ್ನ ಸಾನ್ನಿಧ್ಯವು ತಪ್ಪಿತು; ನಾನು ಲೋಕದಲ್ಲಿ ಅಲೆಯುವವನೂ ದೇಶಭ್ರಷ್ಟನೂ ಆಗಬೇಕಾಯಿತು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು ಎಂದು ಹೇಳಿದನು. 15ಅದಕ್ಕೆ ಯೆಹೋವನು - ಕಾಯಿನನ ಪ್ರಾಣವನ್ನು ತೆಗೆದವನಿಗೆ ಏಳರಷ್ಟು ಪ್ರತಿದಂಡನೆಯಾಗುವದು ಎಂದು ಹೇಳಿ ಅವನನ್ನು ಕಂಡವರು ಕೊಲ್ಲಕೂಡದಂತೆ ಅವನ ಮೇಲೆ ಒಂದು ಗುರುತಿಟ್ಟನು. 16ಕಾಯಿನನು ಯೆಹೋವನ ಸನ್ನಿಧಾನದಿಂದ ಹೊರಟು ನೋದು#4.16 ನೋದು ಅಂದರೆ ಅಲೆದಾಟ. ಎಂಬ ದೇಶದಲ್ಲಿ ವಾಸಿಸಿದನು; ಅದು ಏದೆನ್ ಸೀಮೆಗೆ ಮೂಡಲಲ್ಲಿರುವದು.
ಕಲೆಗಳ ಉತ್ಪತ್ತಿ
17ಕಾಯಿನನು ತನ್ನ ಹೆಂಡತಿಯನ್ನು ಕೂಡಲು ಅವಳು ಗರ್ಭಿಣಿಯಾಗಿ ಹನೋಕನನ್ನು ಹೆತ್ತಳು. ಇದಲ್ಲದೆ ಕಾಯಿನನು ಒಂದು ಊರನ್ನು ಕಟ್ಟಿ ಅದಕ್ಕೆ ಹನೋಕ ಎಂದು ತನ್ನ ಮಗನ ಹೆಸರಿಟ್ಟನು. ಹನೋಕನಿಂದ ಈರಾದನು ಹುಟ್ಟಿದನು. 18ಈರಾದನು ಮೆಹೂಯಾಯೇಲನನ್ನು ಪಡೆದನು. ಮೆಹೂಯಾಯೇಲನು ಮೆತೂಷಾಯೇಲನನ್ನು ಪಡೆದನು. ಮೆತೂಷಾಯೇಲನು ಲೆಮೆಕನನ್ನು ಪಡೆದನು.
19ಲೆಮೆಕನು ಆದಾ ಚಿಲ್ಲಾ ಎಂಬ ಇಬ್ಬರು ಹೆಂಡರನ್ನು ಮಾಡಿಕೊಂಡನು. 20ಆದಳು ಯಾಬಾಲನನ್ನು ಹೆತ್ತಳು; ದನಕರುಗಳನ್ನು ಸಾಕುವವರಾಗಿದ್ದು ಗುಡಾರಗಳಲ್ಲಿ ವಾಸಿಸುವವರೆಲ್ಲರ ಮೂಲಪುರುಷನು ಇವನೇ. 21ಅವನ ತಮ್ಮನ ಹೆಸರು ಯೂಬಾಲನು; ಇವನು ಕಿನ್ನರಿಕೊಳಲುಗಳನ್ನು ನುಡಿಸುವವರ ಮೂಲ ಪುರುಷನು. 22ಚಿಲ್ಲಾ ಎಂಬವಳು ತೂಬಲ್ಕಾಯಿನನನ್ನು#4.22 ಅಥವಾ: ಕಮ್ಮಾರ ತೂಬಲನನ್ನು. ಹೆತ್ತಳು; ಅವನು ಕುಲಿಮೆ ಮಾಡಿ ಕಬ್ಬಿಣ ತಾಮ್ರದ ಆಯುಧಗಳನ್ನು ಕಲ್ಪಿಸಿದವನು. ತೂಬಲ್ಕಾಯಿನನ ತಂಗಿ ನಯಮಾ. 23ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು -
ಆದಾ, ಚಿಲ್ಲಾ, ನನ್ನ ಮಾತಿಗೆ ಕಿವಿಗೊಡಿರಿ;
ಲೆಮೆಕನ ಹೆಂಡತಿಯರೇ, ನಾನು ಹೇಳುವದನ್ನು ಕೇಳಿರಿ.
ನನಗೆ ಗಾಯಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು;
ನನ್ನನ್ನು ಹೊಡೆದ ಒಬ್ಬ ಪ್ರಾಯಸ್ಥನನ್ನು ಹತಮಾಡಿದೆನು.
24ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತಿದಂಡನೆ ಬರುವದಾದರೆ
ಲೆಮೆಕನನ್ನು ಹೊಡೆಯುವವನಿಗೆ ಎಪ್ಪತ್ತೇಳರಷ್ಟಾಗುವದಲ್ಲವೇ.
25ಆದಾಮನು ತಿರಿಗಿ ತನ್ನ ಹೆಂಡತಿಯನ್ನು ಕೂಡಲು ಆಕೆ ಗಂಡುಮಗುವನ್ನು ಹೆತ್ತು - ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತಾನವನ್ನು ನೇವಿುಸಿದನೆಂದು ಆ ಮಗುವಿಗೆ ಸೇತನೆಂಬ#4.25 ಸೇತ್ ಅಂದರೆ ನೇವಿುಸಲ್ಪಟ್ಟವನು. ಹೆಸರಿಟ್ಟಳು. 26ತರುವಾಯ ಸೇತನು ಸಹ ಮಗನನ್ನು ಪಡೆದು ಅವನಿಗೆ ಎನೋಷ್ ಎಂಬ ಹೆಸರಿಟ್ಟನು; ಆ ಕಾಲದಲ್ಲಿ ಯೆಹೋವ ಎಂಬ ಹೆಸರನ್ನು ಹೇಳಿಕೊಂಡು ಆರಾಧಿಸುವದಕ್ಕೆ ಪ್ರಾರಂಭವಾಯಿತು.
ప్రస్తుతం ఎంపిక చేయబడింది:
ಆದಿಕಾಂಡ 4: KANJV-BSI
హైలైట్
షేర్ చేయి
కాపీ
మీ పరికరాలన్నింటి వ్యాప్తంగా మీ హైలైట్స్ సేవ్ చేయబడాలనుకుంటున్నారా? సైన్ అప్ చేయండి లేదా సైన్ ఇన్ చేయండి
Kannada J.V. Bible © The Bible Society of India, 2016.
Used by permission. All rights reserved worldwide.

: