ಆದಿಕಾಂಡ 5

5
ಜಲಪ್ರಳಯಕ್ಕೆ ಮುಂಚೆ ಬದುಕಿದ ಹತ್ತು ಮಂದಿ ಮಹಾಪುರುಷರ ಚರಿತ್ರೆ
1ಆದಾಮನ ವಂಶದವರ ಚರಿತ್ರೆಯು - ದೇವರು ಸೃಷ್ಟಿಕಾಲದಲ್ಲಿ ಮನುಷ್ಯನನ್ನು ತನ್ನ ಹೋಲಿಕೆಗೆ ಸರಿಯಾಗಿ ಉಂಟುಮಾಡಿದನು. 2ಅವರನ್ನು ಗಂಡು ಹೆಣ್ಣಾಗಿ ಉಂಟುಮಾಡಿದನು. ಇದಲ್ಲದೆ ಅದೇ ದಿವಸದಲ್ಲಿ ಅವರನ್ನು ಆಶೀರ್ವದಿಸಿ ಅವರಿಗೆ ಮನುಷ್ಯ#5.2 ಮೂಲ: ಆದಾಮ್. ಎಂದು ಹೆಸರಿಟ್ಟನು.
3ಆದಾಮನು ನೂರಮೂವತ್ತು ವರುಷದವನಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು. 4ಸೇತನು ಹುಟ್ಟಿದ ಮೇಲೆ ಆದಾಮನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರು ವರುಷ ಬದುಕಿದನು. 5ಅವನು ಒಟ್ಟು ಒಂಭೈನೂರ ಮೂವತ್ತು ವರುಷ ಬದುಕಿ ಸತ್ತನು.
6ಸೇತನು ನೂರ ಐದು ವರುಷದವನಾದಾಗ ಎನೋಷನನ್ನು ಪಡೆದನು. 7ಎನೋಷನು ಹುಟ್ಟಿದ ಮೇಲೆ ಸೇತನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಏಳು ವರುಷ ಬದುಕಿದನು. 8ಅವನು ಒಟ್ಟು ಒಂಭೈನೂರ ಹನ್ನೆರಡು ವರುಷ ಬದುಕಿ ಸತ್ತನು.
9ಎನೋಷನು ತೊಂಭತ್ತು ವರುಷದವನಾದಾಗ ಕೇನಾನನನ್ನು ಪಡೆದನು. 10ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರುಷ ಬದುಕಿದನು. 11ಅವನು ಒಟ್ಟು ಒಂಭೈನೂರ ಐದು ವರುಷ ಬದುಕಿ ಸತ್ತನು.
12ಕೇನಾನನು ಎಪ್ಪತ್ತು ವರುಷದವನಾದಾಗ ಮಹಲಲೇಲನನ್ನು ಪಡೆದನು. 13ಮಹಲಲೇಲನು ಹುಟ್ಟಿದ ಮೇಲೆ ಕೇನಾನನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ನಾಲ್ವತ್ತು ವರುಷ ಬದುಕಿದನು. 14ಅವನು ಒಟ್ಟು ಒಂಭೈನೂರ ಹತ್ತು ವರುಷ ಬದುಕಿ ಸತ್ತನು.
15ಮಹಲಲೇಲನು ಅರುವತ್ತೈದು ವರುಷದವನಾದಾಗ ಯೆರೆದನನ್ನು ಪಡೆದನು. 16ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಮೂವತ್ತು ವರುಷ ಬದುಕಿದನು. 17ಅವನು ಒಟ್ಟು ಎಂಟುನೂರ ತೊಂಭತ್ತೈದು ವರುಷ ಬದುಕಿ ಸತ್ತನು.
18ಯೆರೆದನು ನೂರ ಅರುವತ್ತೆರಡು ವರುಷದವನಾದಾಗ ಹನೋಕನನ್ನು ಪಡೆದನು. 19ಹನೋಕನು ಹುಟ್ಟಿದ ಮೇಲೆ ಯೆರೆದನು ಎಂಟುನೂರು ವರುಷ ಬದುಕಿದನು. 20ಅವನು ಒಟ್ಟು ಒಂಭೈನೂರ ಅರುವತ್ತೆರಡು ವರುಷ ಬದುಕಿ ಸತ್ತನು.
21ಹನೋಕನು ಅರುವತ್ತೈದು ವರುಷದವನಾದಾಗ ಮೆತೂಷೆಲಹನನ್ನು ಪಡೆದನು. 22ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ಗಂಡು ಹೆಣ್ಣು ಮಕ್ಕಳನ್ನು ಪಡೆದು ದೇವರ ಅನ್ಯೋನ್ಯತೆಯಲ್ಲಿ ಮುನ್ನೂರು ವರುಷ ಬದುಕಿದನು. 23ಅವನು ಬದುಕಿದ ಕಾಲವೆಲ್ಲಾ ಮುನ್ನೂರ ಅರುವತ್ತೈದು ವರುಷ. 24ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ ದೇವರು ಅವನನ್ನು ಕರೆದುಕೊಂಡದ್ದರಿಂದ ಕಾಣದೆ ಹೋದನು.
25ಮೆತೂಷೆಲಹನು ನೂರ ಎಂಭತ್ತೇಳು ವರುಷದವನಾದಾಗ ಲೆಮೆಕನನ್ನು ಪಡೆದನು. 26ಲೆಮೆಕನು ಹುಟ್ಟಿದ ಮೇಲೆ ಮೆತೂಷೆಲಹನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಏಳುನೂರ ಎಂಭತ್ತೆರಡು ವರುಷ ಬದುಕಿದನು. 27ಅವನು ಒಟ್ಟು ಒಂಭೈನೂರ ಅರುವತ್ತೊಂಭತ್ತು ವರುಷ ಬದುಕಿ ಸತ್ತನು.
28ಲೆಮೆಕನು ನೂರ ಎಂಭತ್ತೆರಡು ವರುಷದವನಾದಾಗ ಒಬ್ಬ ಮಗನನ್ನು ಪಡೆದು - 29ಯೆಹೋವನು ಶಪಿಸಿದ ಭೂವಿುಯಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಶ್ರಮೆಯಲ್ಲಿಯೂ ಈ ಮಗನು ನಮ್ಮನ್ನು ಉಪಶಮನಗೊಳಿಸುವನು ಎಂದು ಹೇಳಿ ಅವನಿಗೆ ನೋಹ#5.29 ನೋಹ ಅಂದರೆ ಉಪಶಮನ. ಎಂದು ಹೆಸರಿಟ್ಟನು. 30ನೋಹನು ಹುಟ್ಟಿದ ಮೇಲೆ ಲೆಮೆಕನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಐನೂರ ತೊಂಭತ್ತೈದು ವರುಷ ಬದುಕಿದನು. 31ಅವನು ಒಟ್ಟು ಏಳುನೂರ ಎಪ್ಪತ್ತೇಳು ವರುಷ ಬದುಕಿ ಸತ್ತನು.
32ನೋಹನು ಐನೂರು ವರುಷದವನಾದಾಗ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು.

高亮显示

分享

复制

None

想要在所有设备上保存你的高亮显示吗? 注册或登录